Tourism in karnataka, Tourism Karnataka, Tourism of karnataka
ನಮ್ಮ ರಾಜ್ಯ ಮಾತ್ರವಲ್ಲದೆ, ಇಡೀ ದೇಶದಲ್ಲಿಯೇ ಸುಪ್ರಸಿದ್ಧವಾಗಿರುವ ಸುಂದರ ಗೋಕಾಕ್ ಜಲಪಾತ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿದೆ. ಗೋಕಾಕ್ ಕರದಂಟಿಗೆ ಹೇಗೆ ಪ್ರಸಿದ್ಧವೋ ಅದೇ ರೀತಿ ಜಲಪಾತಕ್ಕೂ ಪ್ರಸಿದ್ಧವಾಗಿದೆ. ಅಮೆರಿಕದ ಜಗತ್ಪ್ರಸಿದ್ಧ ನಯಾಗರ ಜಲಪಾತಕ್ಕೆ ಹೋಲಿಸಲಾಗುವ ಗೋಕಾಕ್ ಜಲಪಾತ
ಬೆಳಗಾವಿಯಿಂದ 58 ಕಿ.ಮೀ ಹಾಗೂ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಜುಲೈನಿಂದ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಕೆಂಪಾದ ನೀರಿನಿಂದ ಹರಿದು ಬರುವ ಘಟಪ್ರಭಾ, ನದಿ 52 ಮೀ. ಎತ್ತರದಿಂದ ಧುಮ್ಮಿಕ್ಕಿ ಆಳ ಕಣಿವೆಗೆ ಬೀಳುತ್ತದೆ. ಈ ನಯನ ಮನೋಹರ ದೃಶ್ಯ ತುಂಬಾ ಸುಂದರವಾಗಿರುತ್ತದೆ. ಈ ಜಲಪಾತಕ್ಕಿಂತ ಸ್ವಲ್ಪ ಮುಂಚೆಯೇ ನದಿ ದಡಗಳ ಮೇಲೆ ಜನ ಸಂಚಾರಕ್ಕೆ ಅನುಕೂಲ ಕಲ್ಪಿಸಲು 201 ಮೀಟರ್ ಉದ್ದದ ತೂಗು ಸೇತುವೆ ನಿರ್ಮಿಸಲಾಗಿದೆ.
ಈ ಸೇತುವೆ ಮೇಲೆ ನಡೆಯುವುದೇ ಒಂದು ಥ್ರಿಲ್. ಈ ಜಲಪಾತದ ಬಳಿ ಒಂದು ಸುಂದರ ಗಾರ್ಡನ್ ಕೂಡಾ ಇದೆ. ಎಲ್ ಶೇಪ್‌ನಲ್ಲಿರುವ ಗೋಕಾಕ್ ಜಲಪಾತ ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ಈ ಜಲರಾಶಿ ನೋಡಲು ಸಾವಿರಾರು ಜನರು ಬರುತ್ತಾರೆ