ಹುಬ್ಬಳ್ಳಿಯ ಪ್ರವಾಸಿ ತಾಣಗಳು

ಹುಬ್ಬಳ್ಳಿಯ ಪ್ರವಾಸಿ ತಾಣಗಳು

ಹುಬ್ಬಳ್ಳಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದು ಮತ್ತು ಇದನ್ನು ಧಾರವಾಡದ ಅವಳಿ ನಗರದ ಎಂದು ಕರೆಯಲಾಗುತ್ತದೆ. ಇದು ಕರ್ನಾಟಕದ ಧಾರವಾಡ ಜಿಲ್ಲೆಯ ಆಡಳಿತದ ರಾಜಧಾನಿಯೂ ಆಗಿದೆ. ಹುಬ್ಬಳ್ಳಿಯು ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿದೆ ಮತ್ತು ಕೈಗಾರಿಕೆ, ವಾಹನ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು ಬೆಂಗಳೂರಿನ ನಂತರದ ಸ್ಥಾನವನ್ನು ಪಡೆದಿದೆ. ಕನ್ನಡ ಭಾಷೆಯಲ್ಲಿ “ಹುಬ್ಬಳ್ಳಿ” ಎಂದರೆ “ಹೂಬಿಡುವ ಬಳ್ಳಿ” ಇದರಿಂದ ಹುಬ್ಳಿ ಎಂಬ ಪದ ಹುಟ್ಟಿಕೊಂಡಿತು. ಹುಬ್ಬಳ್ಳಿ ಐತಿಹಾಸಿಕ ನಗರ ಮತ್ತು ಚಾಲುಕ್ಯರ ಅವಧಿಯಿಂದಲೂ ಅಸ್ತಿತ್ವದಲ್ಲಿದ್ದ ನಗರ. ಹಿಂದೆ ಈ ನಗರಕ್ಕೆ ‘ರಾಯರ ಹುಬ್ಬಳ್ಳಿ’ ಅಥವಾ ‘ಎಲೆಯ ಪುರವದ ಹಳ್ಳಿ’ ಮತ್ತು”ಪುರ್ಬಳ್ಳಿ” ಹೆಸರುಗಳು ಇದ್ದವು. ವಿಜಯನಗರ ರಾಜರ ಆಳ್ವಿಕೆಯಲ್ಲಿ, ರಾಯರ ಹುಬ್ಬಳ್ಳಿ ಹತ್ತಿ, ಪೆಟ್ಲುಪ್ಪು ಮತ್ತು ಕಬ್ಬಿಣದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು

ಹುಬ್ಬಳ್ಳಿಯು ಮರಾಠರು, ಮೊಘಲರು ಮತ್ತು ಬ್ರಿಟಿಷರ ದಾಳಿಗೆ ಸದಾ ಗುರಿಯಾಗುತ್ತಿತ್ತು. ಬ್ರಿಟಿಷರು ಇಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಅದನ್ನು 1675ರಲ್ಲಿ ಶಿವಾಜಿ ಕೊಳ್ಳೆ ಹೊಡೆದನು. ಹುಬ್ಬಳ್ಳಿ ಸ್ವಲ್ಪ ಕಾಲ ಮೊಘಲರ ಸವಣೂರು ನವಾಬ್ ಆಳ್ವಿಕೆಗೆ ಒಳಪಟ್ಟಿತು ಮತ್ತು ದುರ್ಗದಬೈಲ್ ನ ಸುತ್ತಮುತ್ತ ಬಸಪ್ಪಶೆಟ್ಟಿ ಎಂಬ ವ್ಯಾಪಾರಿ ಹೊಸ ನಗರವನ್ನು ನಿರ್ಮಿಸಿದ್ದನು. ಇದು 1755-56ರ ಅವಧಿಯಲ್ಲಿ ಮರಾಠರಿಂದ ವಶಪಡಿಸಿಕೊಳ್ಳಲ್ಪಟ್ಟಿತು ಮತ್ತು ಈ ಮಧ್ಯೆ ಹೈದರ್ ಅಲಿ ಸಹ ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದನು, ಆದರೆ ಮರಾಠರು 1790ರಲ್ಲಿ ಇದನ್ನು ಮರಳಿ ಪಡೆದರು. 1817 ರಲ್ಲಿ ಹಳೆಯ ಹುಬ್ಬಳ್ಳಿ ಬ್ರಿಟಿಷ್ ನಿಯಂತ್ರಣದಲ್ಲಿ ಬಂದಿತು ಮತ್ತು 1820 ರಲ್ಲಿ ಹೊಸ ಹುಬ್ಬಳ್ಳಿ ಸಹ ಅದನ್ನೇ ಅನುಸರಿಸಿತು. 1880 ರಲ್ಲಿ, ಬ್ರಿಟಿಷರು ಹುಬ್ಬಳ್ಳಿಯಲ್ಲಿ ಒಂದು ರೈಲ್ವೆ ಕಾರ್ಯಾಗಾರವನ್ನು ಪ್ರಾರಂಭಿಸಿದರು ಇದು ಈ ಸ್ಥಳವನ್ನು ಪ್ರಸಿದ್ಧ ಕೈಗಾರಿಕಾ ಪ್ರದೇಶವನ್ನಾಗಿ ರೂಪಾಂತರಗೊಳಿಸಿತು. ಇಂದು, ಹುಬ್ಬಳ್ಳಿ ತನ್ನ ವಿವಿಧ ಹತ್ತಿ ಗಿರಣಿ ಮತ್ತು ಸಂಸ್ಕರಣೆ ಗಿರಣಿಗಳು ಹಾಗೂ ತನ್ನ ಜವಳಿ ಉದ್ಯಮಗಳಿಂದ ಪ್ರಸಿದ್ಧವಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹತ್ತಿ ಮತ್ತು ಕಡಲೆಕಾಯಿಗಳನ್ನು ಪ್ರಮುಖ ಬೆಳೆಗಳಾಗಿ ಬೆಳೆಯುವುದರಿಂದ ಇದು ಕರ್ನಾಟಕದಲಿ ಹತ್ತಿ ಮತ್ತು ಕಡಲೆಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ಹುಬ್ಬಳ್ಳಿಯು ನೈರುತ್ಯ ರೈಲ್ವೆ ವಲಯ ಮತ್ತು ಹುಬ್ಬಳ್ಳಿ ವಿಭಾಗದ ಕೇಂದ್ರ ಕಚೇರಿಯಾಗಿದೆ.


ನಗರವು ಮಲೆನಾಡು ಮತ್ತು ಡೆಕ್ಕನ್ ಪ್ರಸ್ಥಭೂಮಿ ಮಧ್ಯದಲ್ಲಿದ್ದು, ಉಷ್ಣವಲಯದ ತೇವ ಮತ್ತು ಒಣ ಹವಾಮಾನವನ್ನು ಅದರ ಭೇಟಿಮಾಡುವವರಿಗೆ ಒದಗಿಸುತ್ತದೆ. ಮತ್ತು ಅಕ್ಟೋಬರ್ ನಿಂದ ಫೆಬ್ರವರಿ ಹುಬ್ಬಳ್ಳಿ ಭೇಟಿಗೆ ಅತ್ಯಂತ ಸೂಕ್ತ ಕಾಲ.ಇದು ಎಲ್ಲಾ ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಮತ್ತು ನೆರೆಯ ರಾಜ್ಯಗಳಿಗೆ ರೈಲುಗಳ ಮತ್ತು ರಸ್ತೆಗಳ ಮೂಲಕ ಸಂಪರ್ಕ ಹೊಂದಿದೆ ಆದ್ದರಿಂದ ಹುಬ್ಬಳ್ಳಿಯನ್ನು ಸುಲಭವಾಗಿ ತಲುಪಬಹುದು.

ಹುಬ್ಬಳ್ಳಿ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳು

1 ಭವಾನಿಶಂಕರ್ ದೇವಸ್ಥಾನ

2. ಸಿದ್ಧರೂಧ ಮಠ,

3.ಉಂಕಲ್ ಸರೋವರ

4.ನೃಪತುಂಗ ಬೆಟ್ಟ