Categories: AdventureExplore

ಈ ಕೋಟೆ ಇರುವುದು ಎಲ್ಲಿ ಗೊತ್ತೆ?

ಕೋಟೆಗಳು ನಿಜಕ್ಕೂ ಹಿಂದಿನ ವೈಭವವನ್ನು ಸಾರುವ, ಕಥೆಗಳನ್ನು ಹೇಳುವ, ಘಟನೆಗಳನ್ನು ತಿಳಿಸುವ ಅದ್ಭುತ ರಚನೆಗಳಾಗಿವೆ. ಯುವಕರಿಗೆ ಅದರಲ್ಲೂ ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಕೋಟೆಗಳಲ್ಲಿ ಸುತ್ತಾಡುವುದೆಂದರೆ ಬಲು ಇಷ್ಟ. ಆದರೆ ಕೋಟೆಗಳು ಎಷ್ಟು ವಿಶೇಷವಾಗಿರುತ್ತದೊ ಅಷ್ಟೆ ರೋಮಾಂಚಕವಾಗಿರುತ್ತದೆ. ಹುಬ್ಬೇರಿಸುವಂತೆ ಮಾಡುವ ಕರ್ನಾಟಕದ ಭವ್ಯ ಕೋಟೆಗಳು ಕೆಲವು ಕೋಟೆಗಳು ಎಷ್ಟು ಸುಂದರವಾಗಿವೆ ಎಂದರೆ ಸರ್ಕಾರವು ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರ್ವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು ಮುಂದಾಗಿರುತ್ತವೆ. ಅಂತಹ ಒಂದು ರೋಮಾಂಚಕ ಕೋಟೆಗಳ ಪೈಕಿ ಬೇಕಲ್ ಕೋಟೆ ಸಹ ಒಂದು. ಇದರ ವಿಶೇಷತೆ ಎಂದರೆ ಒಂದೆಡೆ ಕೋಟೆಯಿದ್ದರೆ ಇನ್ನೊಂದೆಡೆ ಅದ್ಭುತವಾಗಿ ಕಂಡುಬರುವ ಅರಬ್ಬಿ ಸಮುದ್ರ ತೀರ.

ಈ ಸುಂದರ ಕೋಟೆಯು ಸಾಕಷ್ಟು ಜನಪ್ರೀಯತೆಗಳಿಸುತ್ತಿದೆ. ಕಾರಣ ಇದರ ಸುತ್ತಮುತ್ತಲಿರುವ ಅದ್ಭುತ ಹಸಿರಿನ ಸೌಂದರ್ಯ ಅದೂ ಮಳೆಗಾಲದ ಸಮಯದಲ್ಲಿ ವಿಶೇಷವಾಗಿ. ಅದಕ್ಕೆ ಮತ್ತಷ್ಟು ಇಂಬು ನೀಡುವಂತಿದೆ ಅರಬ್ಬಿ ಸಮುದ್ರದ ಕಣ್ಮನ ಸೆಳೆಯುವ ನೋಟ ಕಡಲ ತೀರವು ಮಲೀನಗೊಂಡಿಲ್ಲ, ಚಿಕ್ಕ ಪುಟ್ಟ ಬಂಡೆಗಳ ಮೇಲೆ ಅಲೆಗಳು ಹಾಯುವಾಗ ಆ ಸಮಯದಲ್ಲಿ ಅಲ್ಲಿ ನಿಂತು ಅದರ ಆನಂದ ಪಡೇಯುವುದೆಂದರೆ ಬಹುತೇಕರಿಗೆ ಬಲು ಪ್ರೀತಿ. ಹೆಚ್ಚು ವಾಣಿಜ್ಯಿಕರಣಗೊಳ್ಳದಿರುವುದು ಮತ್ತೊಂದು ವಿಶೇಷತೆ. ಚಳಿಗಾಲ ಇಲ್ಲಿಗೆ ತೆರಳಲು ಪ್ರಶಸ್ತವಾಗಿದ್ದರೂ ಮಳೆಗಾಲದಲ್ಲಿ ಇದು ಸಿಂಗರಿಸಿಕೊಳ್ಳುವ ರೀತಿ ಮತ್ತಷ್ಟು ಮನಮೋಹಕವಾಗಿರುತ್ತದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನೂ ಸಹ ಸೆಳೆಯುತ್ತಿದೆ. ಅಲ್ಲದೆ ಕೋಟೆಯು ಇನ್ನೂ ಸದೃಢವಾಗಿದ್ದು ಆಕರ್ಷಕ ರಚನೆಗಳಿಂದ ಕೂಡಿರುವುದು ಇತಿಹಾಸಪ್ರೀಯ ಪ್ರವಾಸಿಗರ ದೃಷ್ಟಿಯಿಂದ ಹೆಚ್ಚಿನ ಮನ್ನಣೆಗಳುಸಿದೆ ಕೋಟೆಯ ಮುಖ್ಯ ಗುಣ ಲಕ್ಷಣ ಎಂದರೆ ನೀರು ಸಂಗ್ರಹಿಸಿ ಶೇಖರಿಸಿಡಲು ನಿರ್ಮಿಸಲಾದ ನೀರಿನ ಟ್ಯಾಂಕ್ ಹಾಗೂ ಅದರೆಡೆಗೆ ತೆರಳಲು ನಿರ್ಮಿಸಲಾಗಿರುವ ಮೆಟ್ಟಿಲುಗಳು. ಇಂದಿಗೂ ಈ ರಚನೆ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವೀಕ್ಷಣಾ ಗೋಪುರ ಈ ಕೋಟೆಯ ಮತ್ತೊಂದು ಹೈಲೈಟ್. ಇಲ್ಲಿಂದ ಸುತ್ತಮುತ್ತಲಿನ ಹಲವು ಪಟ್ಟಣಗಳ ಹಾಗೂ ಅರಬ್ಬಿ ಸಮುದ್ರದ ಮನಸೆಳೆವಂತಹ ವಿಹಂಗಮ ನೋಟಗಳನ್ನು ಕಾಣಬಹುದು. ನೀವು ಪ್ರತಿಭೆಯುಳ್ಳವರಾಗಿದ್ದರೆ ಅತ್ಯುತ್ತಮ ಎನ್ನಬಹುದಾದ ಚಿತ್ರಗಳನ್ನು ಕ್ಲಿಕ್ಕಿಸಲು ವಿಫುಲವಾದ ಅವಕಾಶ ನಿಮಗಿಲ್ಲಿ ಲಭಿಸುತ್ತದೆ.

ಈ ಕೋಟೆ ಇರುವುದು ಎಲ್ಲಿ ಗೊತ್ತೆ? ಕೇರಳದ ಕಾಸರಗೋಡಿನಲ್ಲಿ. ಕಾಸರಗೋಡು ಜಿಲ್ಲೆಯ ಬೇಕಲ್ ಎಂಬ ಗ್ರಾಮದಲ್ಲಿ ಈ ಕೋಟೆಯಿದೆ. ಇದರ ಹೆಗ್ಗಳಿಕೆಯೆಂದರೆ ಕೇರಳದಲ್ಲೆ ಅತಿ ದೊಡ್ಡದಾದ ಕೋಟೆ ಇದಾಗಿದೆ. ಹಾಗಾಗಿ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ.

Chethan Mardalu

Share
Published by
Chethan Mardalu

Recent Posts

Kunchikal Falls

Located near the Masthikatte-Hulikal on the Shimoga -Udupi border in Karnataka, Kunchikal Falls is formed…

4 years ago

ಕುಂಚಿಕಲ್ ಜಲಪಾತ

ಕರ್ನಾಟಕದ ಶಿವಮೊಗ್ಗ -ಉಡಿಪಿ ಗಡಿಯಲ್ಲಿರುವ ಮಸ್ತಿಕಟ್ಟೆ-ಹುಲಿಕಲ್ ಬಳಿ ಇರುವ ಕುಂಚಿಕಲ್ ಜಲಪಾತವು ವರಹಿ ನದಿಯಿಂದ ರೂಪುಗೊಂಡಿದೆ. ಈ ಕಲ್ಲಿನ ಬಂಡೆಗಳ…

4 years ago

Om shaped beach!

Gokarna is famous for its beaches. The scenic beauty of the beaches encapsulated by the…

4 years ago

ಓಂ ಆಕಾರದ ಬೀಚ್ !

ಗೋಕರ್ಣ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪಶ್ಚಿಮ ಘಟ್ಟದ ​​ಗಡಿಯಲ್ಲಿರುವ ಒಂದು ಬದಿಯಲ್ಲಿ ಸುವಾಸನೆಯ ಹಸಿರಿನಿಂದ ಆವೃತವಾಗಿರುವ ಕಡಲತೀರಗಳ ರಮಣೀಯ ಸೌಂದರ್ಯವು ನೋಡಲು…

4 years ago

Bandipur Wildlife sanctuary

The Bandipur forest reserve is located towards the southern region in the state of Karnataka.…

4 years ago

ಬಂಡೀಪುರ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ

ಬಂಡೀಪುರ ಅರಣ್ಯ ಮೀಸಲು ಪ್ರದೇಶವು ಕರ್ನಾಟಕ ರಾಜ್ಯದ ದಕ್ಷಿಣ ಪ್ರದೇಶದ ಕಡೆಗೆ ಇದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ವನ್ಯಜೀವಿ ಅಭಯಾರಣ್ಯವು ನೈಸರ್ಗಿಕ…

4 years ago