ಗರುಡಸ್ವಾಮಿಯ ದೇವಾಲಯಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಗರುಡಸ್ವಾಮಿಯ ದೇವಾಲಯಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಕೊಲದೇವಿಯ ಗರುಡಸ್ವಾಮಿಯ ದೇವಾಲಯ. ಕೋಲಾರ ಜಿಲ್ಲೆಯ ಮುಳುಬಾಗಲು ತಾಲೂಕಿನಲ್ಲಿ ಈ ದೇವಾಲಯವಿದೆ. ಮುಳುಬಾಗಿಲಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕೊಲದೇವಿ ಎಂಬ ಕ್ಷೇತ್ರದಲ್ಲಿ ಈ ದೇವಸ್ಥಾನವಿದ್ದು ಮುಳಬಾಗಲಿನಿಂದ ಇಲ್ಲಿಗೆ ತೆರಳಬಹುದಾಗಿದೆ. ಅಲ್ಲದೇ ಕೋಲಾರದಿಂದ ಮುಡಿಯನೂರು ಕ್ರಾಸ್ ಗೆ ತೆರಳಿ ಅಲ್ಲಿಂದ 4 KM ಸಾಗಿದರೆ ದೇವಾಲಯವನ್ನು ತಲುಪಬಹುದು. ಹಿಂದೆ ದ್ವಾಪರಯುಗದಲ್ಲಿ ಅರ್ಜುನನೊಮ್ಮೆ ಬೇಟೆಯಾಡಲು ಕಾಡಿಗೆ ತೆರಳಿ ಬಾಣಗಳನ್ನು ಬಿಡುತ್ತಿದ್ದಾಗ ಅವುಗಳ ರಭಸ ಹಾಗೂ ಶಕ್ತಿಯಿಂದ ಕಾಡಲ್ಲಿ ಬೆಂಕಿ ಹತ್ತಿ ಸಾಕಷ್ಟು ಹಾವುಗಳು ಸಾಯಲ್ಪಟ್ಟವು. ಇದರಿಂದೆ ಅರ್ಜುನನಿಗೆ ಸರ್ಪದೋಷ ಉಂಟಾಗಿ ಅದರಿಂದ ಮುಕ್ತಿ ಪಡೆಯಲು ಗರುಡನನ್ನು ಪೂಜಿಸಬೇಕೆಂಬ ಪರಿಹಾರವು ಋಷಿ ಮುನಿಗಳಿಂದ ಸಲಹೆ ರುಪದಲ್ಲಿ ಸಿಕ್ಕಿತು. ಹೀಗಾಗಿ ಅರ್ಜುನನೆ ಸ್ವತಃ ಪ್ರತಿಷ್ಠಾಪಿಸಿದ ಗರುಡ ದೇವಾಲಯ ಇದಾಗಿದೆ ಎಂಬ ಪ್ರತೀತಿಯಿದೆ.

ಇನ್ನೊಂದು ಕಥೆಯ ಪ್ರಕಾರ ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಿರುವಾಗ, ಸೀತೆಯ ಅರ್ತನಾದವನ್ನು ಕೇಳಿದ ಜಟಾಯು ತನ್ನ ಸಾಮರ್ಥ್ಯಕ್ಕೆ ಮೀರಿ ಸೀತೆಯನ್ನು ಕಾಪಾಡಲು ಪ್ರಯತ್ನಿಸಿತಾದರೂ ರಾವಣನ ಖಡ್ಗದಿಂದ ಕೊಲ್ಲಲ್ಪಟ್ಟಿತು. ಹೀಗಾಗಿ ಈ ಸ್ಥಳಕ್ಕೆ ಕೊಲದೇವಿ ಎಂಬ ಹೆಸರುಅಂದಿತೆನ್ನಲಾಗಿದೆ. ಅಲ್ಲದೆ ಈ ಒಂದು ಸ್ಥಳದಲ್ಲಿ ಜಟಾಯು ಪ್ರಾಣ ಬಿಟ್ಟು ವಿಷ್ಣುವಿನ ಕೃಪೆಗೆ ಪಾತ್ರವಾಗಿ ನಂತರ ಇದೆ ಸ್ಥಳದಲ್ಲಿ ಗರುಡ ದೇವರಾಗಿ ನಂಬಿಕೊಂಡು ಬರುವ ಭಕ್ತಾದಿಗಳ ಸಕಲ ಕಷ್ಟಗಳನ್ನು ದೂರ ಮಾಡುವ ದೈವವಾಗಿ ಪ್ರಖ್ಯಾತವಾಗಿದೆ.

ಈ ದೇವಾಲಯದಲ್ಲಿ ಕೇವಲ ಗರುಡಸ್ವಾಮಿಯಲ್ಲದೆ ಆಂಜನೇಯನ ವಿಶಿಷ್ಟ ರೂಪವನ್ನು ಕಾಣಬಹುದಾಗಿದೆ. ಅಲ್ಲದೆ ಇನ್ನೊಂದು ವಿಶೇಷವೆಂದರೆ ಗರುಡಸ್ವಾಮಿಯು ಇಲ್ಲಿ ತನ್ನ ಹೆಗಲಿನ ಎರಡೂ ಬದಿಗಳಲ್ಲಿ ವಿಷ್ಣು ಹಾಗೂ ಲಕ್ಷ್ಮೆ ದೇವಿಯರನ್ನು ಕುಳ್ಳಿರಿಸಿಕೊಂಡು ನಿಂತಿರುವುದು. ಹೀಗಾಗಿ ವಿಷ್ಣುವಿನ ಆಶೀರ್ವಾದವೂ ಸಹ ಇಲ್ಲಿ ಸುಲಭವಾಗಿ ದೊರೆಯುತ್ತದೆಂಬ ಪ್ರಬಲ ನಂಬಿಕೆ ಇಲ್ಲಿ ಭೇಟಿ ನೀಡುವ ಭಕ್ತರಲ್ಲಿದೆ. ಬೆಂಗಳೂರಿನಿಂದ ಈ ಕ್ಷೇತ್ರಕ್ಕೆ ಹೋಗಬಯಸುವವರು ರಾಷ್ಟ್ರೀಯ ಹೆದ್ದಾರಿ 75 ಬಳಸಿಕೊಂಡು ಕೋಲಾರ ದಾಟಿ ನಂತರ ಎಡತಿರುವು ಪಡೆದು ಮುಡಿಯನೂರು ಕ್ರಾಸ್ ತಲುಪಿ ಅಲ್ಲಿಂದ ಕೊಲದೇವಿಗೆ ತೆರಳಬಹುದು.

ಈ ಗರುಡ ದೇವರನ್ನು ದರ್ಶನ ಮಾಡಿದ್ರೆ ಹಲವು ರೀತಿಯ ದೋಷಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ವೈದ್ಯ ಲೋಕಕ್ಕೆ ಸವಾಲಾದ ಹಲವು ಖಾಯಿಲೆಗಳು ಇಲ್ಲಿ ವಾಸಿಯಾಗಿವೆ. ವಾಮಾಚಾರ, ಮಾಟ-ಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸಿದ್ದಾನೆ. ಪ್ರತಿ ಶನಿವಾರ, ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಗರುಡ ದೇವರ ದರ್ಶನ ಪಡೆದರೆ ಬೇಡಿದ್ದನ್ನು ನೀಡುತ್ತಾನೆ ಎಂಬ ಪ್ರತೀತಿ ಇಲ್ಲಿದೆ