ಪ್ರವಾಸಿಗರು , ಶಾಂತಿಯುತ ಮತ್ತು ಸುಂದರ ಪರಿಸರವನ್ನು ಆಸ್ವಾಧಿಸುವದಕ್ಕಾಗಿ 110 ವರ್ಷಗಳಷ್ಟು ಹಳೆಯದಾದ ಜನಪ್ರಿಯ ಉಣಕಲ್ ಕೆರೆಯನ್ನು ಭೇಟಿ ಮಾಡಬೇಕು ‘. 200 ಎಕರೆ ಪ್ರದೇಶವನ್ನು ಆವರಿಸಿರುವ ಈ ಸರೋವರ ಹುಬ್ಬಳ್ಳಿಯ ಅತ್ಯಂತ ಆಕರ್ಷಣೆಗಳಲ್ಲಿ ಒಂದಾಗಿದೆ. ಮನರಂಜನಾ ಚಟುವಟಿಕೆಗಳಲ್ಲದೇ, ಪ್ರವಾಸಿಗರು ಸಂಜೆ ಸಮಯದಲ್ಲಿ ಸುಂದರ ಸೂರ್ಯಾಸ್ತವನ್ನು ವೀಕ್ಷಿಸಲು ಅವಕಾಶವಿದೆ
ಈ ಸ್ಥಳದ ಪ್ರಮುಖ ಆಕರ್ಷಣೆ , ಸರೋವರದ ಮಧ್ಯಮ ಇರಿಸಲಾಗಿರುವ ಸ್ವಾಮಿ ವಿವೇಕಾನಂದರ ವಿಗ್ರಹವಾಗಿದೆ. ಈ ಜಾಗವು 1859 ರಲ್ಲಿ ಜನಿಸಿದ ಶ್ರೀ ಸಿದ್ದಪ್ಪಜ್ಜ ಅವರ ‘ಕರ್ಮ ಭೂಮಿ’, ಎಂದು ಹೆಸರುವಾಸಿಯಾಗಿದೆ. ಅವರು ಗುರುಗಳನ್ನು ಹುಡುಕುವದಕ್ಕಾಗಿ ತಮ್ಮ 14 ನೇ ವಯಸ್ಸಿನಲ್ಲಿ ಮನೆಬಿಟ್ಟು ಹೋದರು ಮತ್ತು ಉಣ್ಕಲ್ ಮೈಲಾರಲಿಂಗನ ದೇವಾಲಯ ನಲ್ಲಿ ನೆಲೆಸಿದರು. ಶ್ರೀ ಸಿದ್ದಪ್ಪಜ್ಜ 1921 ರಲ್ಲಿ ಮರಣವನ್ನಪ್ಪಿದರು ಮತ್ತು ಅಂದಿನಿಂದ ಈ ತಾಣದಲ್ಲಿ ‘ಜಾತ್ರೆಯನ್ನು ನಡೆಸಲಾಗುತ್ತದೆ. ಉಣಕಲ್ ಕೆರೆ ಹತ್ತಿರದ ನಗರಗಳಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಸರೋವರದ ಸಂಕೀರ್ಣ ಸುಂದರ ಹಚ್ಚ ಹಸಿರು ಉದ್ಯಾನ ಪ್ರಯಾಣಿಕರ ಮೈಮರೆಸುತ್ತವೆ. ಇಲ್ಲಿ ಶಾಂತಿ ಮತ್ತು ಪ್ರಶಾಂತತೆಯನ್ನರಸಿ ಪ್ರಯಾಣಿಕರು ಬರುತ್ತಾರೆ. ಅದಲ್ಲದೆ, ಈ ಸರೋವರದಲ್ಲಿ ದೋಣಿ ವಿಹಾರ ಕೂಡ ಮಾಡಬಹುದು.