ನಕ್ಷಾತ್ರಾಕಾರದ ಕೋಟೆ ! ಎಲ್ಲಿದೆ ಗೊತ್ತಾ? ಈ ಲೇಖನ ಓದಿ..

ಈ ಕೋಟೆ ನಿರ್ಮಾಣವಾದ ಸಂದರ್ಭದಲ್ಲಿ ಈ ರೀತಿಯ ವಾಸ್ತುಅಶಿಲಿ ಹೊಂದಿರುವ ಕೋಟೆ ಎಲ್ಲೆಲ್ಲೂ ಇರಲಿಲ್ಲ. ಇದು ಭಾರತದಲ್ಲೆ ವಿಶಿಷ್ಟವಾಗಿ ವಿನ್ಯಾಸ ಪಡಿಸಲಾದ ಕೋಟೆಯಾಗಿ ಗಮನ ಸೆಳೆದಿತ್ತು. ಈ ಅದ್ಭುತ ಕೋಟೆ ಇರುವುದು ಕರ್ನಾಟಕ ರಾಜ್ಯದಲ್ಲಿ.
 ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಈ ಕೋಟೆಯಿದೆ. ಇಂದು ಇದು ಆಕರ್ಷಕ ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತದೆ. ಹಾಸನ ಜಿಲ್ಲೆಯ ಸಕಲೇಶಪುರದಿಂದ ಸುಮಾರು ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ಈ ಕೋಟೆಯಿದೆ. ಸಮುದ್ರ ಮಟ್ಟದಿಂದ 3,241 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಐತಿಹಾಸಿಕ ಅದ್ಭುತ ಪ್ರದೇಶದ ಅತ್ಯಂತ ವಿಹಂಗಮ ನೋಟವನ್ನು ಒದಗಿಸುತ್ತದೆ ಆ ಕೋಟೆಯೇ ಮಂಜರಾಬಾದ್ ಕೋಟೆ. ಇದು ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿದೆ. ಹಾಸನ ಜಿಲ್ಲೆಯ ಸಕಲೇಶ್ವರಪುರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಗ್ರಾಮದಲ್ಲಿನ ಸಣ್ಣ ಗುಡ್ಡದ ಮೇಲೆ ನಕ್ಷಾತ್ರಾಕಾರದ ಕೋಟೆ ಇದೆ. ಈ ಸುಂದರವಾದ ಕೋಟೆಯನ್ನು “ಮೈಸೂರಿನ ಹುಲಿ” ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದರು.

 ಇತಿಹಾಸದಿಂದ ತಿಳಿದುಬರುವ ವಿಚಾರವೆಂದರೆ ಈ ಕೋಟೆಯ ನಿರ್ಮಾಣ 1792 ರಲ್ಲಾಗಿದ್ದು ಇದರ ನಿರ್ಮಾಣ ಮಾಡಿದ್ದು ಟಿಪ್ಪು ಸುಲ್ತಾನ. ಟಿಪ್ಪು ತನ್ನ ಅಧಿಪತ್ಯವನ್ನು ಮೈಸೂರಿನಲ್ಲಿ ಬೆಳೆಸುತ್ತಿದ್ದ ಸಂದರ್ಭದಲ್ಲಿ ಮೈಸೂರು-ಕೊಡಗು ಮಾರ್ಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಬಯಸಿದ್ದ ಹಾಗೂ ಆ ಕಾರಣವಾಗಿ ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಾಣಗಳನ್ನು ಮಾಡಲು ಯೋಜಿಸಿದ್ದ. ಆ ಸಮಯದಲ್ಲಿ ಮರಾಠರು ಹಾಗೂ ಬ್ರಿಟೀಷರು ಒಟ್ಟಾಗಿ ಟಿಪ್ಪುವಿನ ಮೇಲೆ ಯುದ್ಧ ಮಾಡಲು ಯೋಜಿಸಿದ್ದರು. ಇತ್ತ ಟಿಪ್ಪು ಫ್ರೆಂಚರ ಜೊತೆ ತನ್ನ ಸ್ನೇಹ ಬೆಳೆಸಿಕೊಂಡು ಫ್ರೆಂಚರ ಮಿಲಿಟರಿ ಸೈನ್ಯದಲ್ಲಿ ಕೋಟೆ ನಿರ್ಮಾಣ ವಾಸ್ತುಶಿಲ್ಪಿಯಾದ ಸೆಬಾಸ್ಟಿಯನ್ ಲಿ ಪ್ರೆಸ್ಟ್ರೆ ಡಿ ವೌಬನ್ ಎಂಬಾತನಿಗೆ ಈ ವಿಶಿಷ್ಟವಾದ ಕೋಟೆ ನಿರ್ಮಿಸಲು ಆಹ್ವಾನಿಸಿದ್ದ. ಅದರಂತೆ ಆ ಫ್ರೆಂಚ್ ವಾಸ್ತುಶಿಲ್ಪಿ ಈ ಅದ್ಭುತ ಕೋಟೆಯನ್ನು ನಕ್ಷತ್ರದಾಕಾರದಲ್ಲಿ ಅದ್ಭುತವಾಗಿ ವಿನ್ಯಾಸ ಮಾಡಿ ನಿರ್ಮಿಸಿದ್ದ. ಆ ಸಮಯದಲ್ಲಿ ಈ ರೀತಿಯ ಕೋಟೆ ಇದೊಂದೆ ಆಗಿತ್ತು ಹಾಗೂ ವೀಕ್ಷಣಾ ಸ್ಥಳಗಳನ್ನು ಹೊಂದಿತ್ತು. ಹೀಗಾಗಿ ಇಂದು ಇದೊಂದು ಅಪರೂಪದ ಕೋಟೆಯಾಗಿ ಪ್ರವಾಸಿಗರ ಗಮನ ಸೆಳೆಯುತ್ತದೆ. ಈ ಕೋಟೆಯ ಮತ್ತೊಂದು ಗುಣಲಕ್ಷಣವೆಂದರೆ ಆಕಾಶವು ಸ್ಪಷ್ಟವಾಗಿದ್ದ ಸಂದರ್ಭದಲ್ಲಿ ಈ ಕೋಟೆಯ ಮೇಲೆ ನಿಂತು ಸೂಕ್ಷ್ಮವಾಗಿ ಗಮನಿಸಿದಾಗ ಅರಬ್ಬಿ ಸಮುದ್ರದ ನೋಟವನ್ನೂ ಸಹ ಕಾಣಬಹುದೆಂದು ಹೇಳಲಾಗುತ್ತದೆ.

ನಕ್ಷಾತ್ರಾಕಾರದ ಕೋಟೆ ಅನೇಕ ವಿಭಿನ್ನವಾದ ಕೋಟೆಗಳನ್ನು ನೀವು ನೋಡಿದ್ದೀರಾ, ಆದರೆ ಅದ್ಭುತವಾದ ನಕ್ಷತ್ರಾಕಾರದ ಕೋಟೆಯನ್ನು ನೋಡಿದ್ದೀರಾ? ಹಾಗಾದರೆ ಒಮ್ಮೆ ಸಕಲೇಶ್ವರದ ಮಂಜರಾಬಾದ್ ಕೋಟೆಗೆ ಭೇಟಿ ನೀಡಿ. ಈ ಕೋಟೆಗೆ ತೆರಳಲು 250 ಮೆಟ್ಟಿಲುಗಳನ್ನು ಏರಿ ಹೋಗಬೇಕು. ಈ ಕೋಟೆಯು ಅತ್ಯಂತ ಆಕರ್ಷಕವಾಗಿದ್ದು, ಅನೇಕ ಪ್ರವಾಸಿಗರು ವಾರಾಂತ್ಯದ ಸಮಯದಲ್ಲಿ ಭೇಟಿ ನೀಡುತ್ತಿರುತ್ತಾರೆ.
ಈ ಸುಂದರವಾದ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3240 ಅಡಿ ಎತ್ತರದಲ್ಲಿದ್ದು, ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಕೋಟೆಯನ್ನು 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ಈ ಕೋಟೆಯಲ್ಲಿ ಏನೆನಿದೆ? ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಸ್ಥಳ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳು ಕೂಡ ಇವೆ. ಅಷ್ಟೇ ಅಲ್ಲ ಈ ಕೋಟೆಯಲ್ಲಿ ಒಂದು ಸುರಂಗ ಮಾರ್ಗಗಳು ಇವೆ ಎಂದು ಹೇಳಲಾಗುತ್ತಿದೆ. ಆ ಸುರಂಗಗಳು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ.
ತಲುಪುವುದು ಹೇಗೆ: ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣ. ಕೋಟೆ ಬೆಂಗಳೂರು – ಮಂಗಳೂರು ಹೆದ್ದಾರಿ ನಡುವೆ ಇದೆ. ಇದು ಹಾಸನದಿಂದ 46 ಕಿ.ಮೀ ಮತ್ತು ಸಕಲೇಶಪುರದಿಂದ  10  ಕಿ.ಮೀ ದೂರದಲ್ಲಿದೆ

Chethan Mardalu

Share
Published by
Chethan Mardalu

Recent Posts

Kunchikal Falls

Located near the Masthikatte-Hulikal on the Shimoga -Udupi border in Karnataka, Kunchikal Falls is formed…

4 years ago

ಕುಂಚಿಕಲ್ ಜಲಪಾತ

ಕರ್ನಾಟಕದ ಶಿವಮೊಗ್ಗ -ಉಡಿಪಿ ಗಡಿಯಲ್ಲಿರುವ ಮಸ್ತಿಕಟ್ಟೆ-ಹುಲಿಕಲ್ ಬಳಿ ಇರುವ ಕುಂಚಿಕಲ್ ಜಲಪಾತವು ವರಹಿ ನದಿಯಿಂದ ರೂಪುಗೊಂಡಿದೆ. ಈ ಕಲ್ಲಿನ ಬಂಡೆಗಳ…

4 years ago

Om shaped beach!

Gokarna is famous for its beaches. The scenic beauty of the beaches encapsulated by the…

4 years ago

ಓಂ ಆಕಾರದ ಬೀಚ್ !

ಗೋಕರ್ಣ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪಶ್ಚಿಮ ಘಟ್ಟದ ​​ಗಡಿಯಲ್ಲಿರುವ ಒಂದು ಬದಿಯಲ್ಲಿ ಸುವಾಸನೆಯ ಹಸಿರಿನಿಂದ ಆವೃತವಾಗಿರುವ ಕಡಲತೀರಗಳ ರಮಣೀಯ ಸೌಂದರ್ಯವು ನೋಡಲು…

4 years ago

Bandipur Wildlife sanctuary

The Bandipur forest reserve is located towards the southern region in the state of Karnataka.…

4 years ago

ಬಂಡೀಪುರ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ

ಬಂಡೀಪುರ ಅರಣ್ಯ ಮೀಸಲು ಪ್ರದೇಶವು ಕರ್ನಾಟಕ ರಾಜ್ಯದ ದಕ್ಷಿಣ ಪ್ರದೇಶದ ಕಡೆಗೆ ಇದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ವನ್ಯಜೀವಿ ಅಭಯಾರಣ್ಯವು ನೈಸರ್ಗಿಕ…

4 years ago