ಹೆಬ್ಬೆ ಜಲಪಾತ

ಹೆಬ್ಬೆ ಜಲಪಾತ

ಯಾವುದೇ ಜಲಪಾತಗಳಾಗಿರಲಿ ಮಳೆಗಾಲದಲ್ಲಿ ಅದನ್ನು ನೋಡುವ ಮಜಾನೇ ಬೇರೆ. ನೀರಿನಿಂದ ತುಂಬಿರುತ್ತದೆ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಸೌಂದರ್ಯ ಬಣ್ಣಿಸಲಸಾಧ್ಯ. ಅಂತಹದ್ದೇ ಒಂದು ಸುಂದರ ಜಲಪಾತಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಹೆಬ್ಬೆ ಜಲಪಾತವು ಚಿಕ್ಕಮಗಳೂರಿನಲ್ಲಿದೆ. ಕೆಮ್ಮಣ್ಣುಗುಂಡಿನಿಂದ 10 ಕಿ.ಮೀ ದೂರದಲ್ಲಿದೆ. ಈ ಜಲಪಾತಗಳು ಒಂದು ಕಾಫಿ ಎಸ್ಟೇಟ್ ಒಳಗಿನಿಂದ ನಡೆದುಕೊಂಡು ಹೋಗಬಹುದು ಅಥವಾ ವಾಹನಗಳ ಮೂಲಕವೂ ತಲುಪಬಹುದು. ಹೆಬ್ಬೆ ಫಾಲ್ಸ್ ಎರಡು ಹಂತಗಳಲ್ಲಿ 551 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇದು ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎನ್ನಲಾಗುತ್ತದೆ.
ಕೆಮ್ಮಣ್ಣುಗುಂಡಿಯ ಅತ್ಯಾಕರ್ಷಕ ತಾಣವಾದ ಹೆಬ್ಬೆ ಫಾಲ್ಸ್ ಅನ್ನು ಪ್ರವಾಸಿಗರು ನೋಡಲೆಬೇಕು. ಸುಂದರ ಕಾಫಿ ತೋಟಗಳ ಹಿನ್ನೆಲೆಯಲ್ಲಿರುವ ಹೆಬ್ಬೆ ಫಾಲ್ಸ್ ಸುಮಾರು 168 ಮೀಟರ್ ಎತ್ತರದಿಂದ ಬೀಳುವ ನೀರಿನ ರಭಸದ ನೋಟವನ್ನು ಪ್ರವಾಸಿಗರಿಗೆ ಮನದುಂಬಿಸುತ್ತದೆ. ಈ ಜಲಪಾತಕ್ಕೆ ಪ್ರವಾಸಿಗರು ಕೆಮ್ಮಣ್ಣುಗುಂಡಿಯಿಂದ ನಡಿಗೆಯ ಮೂಲಕ ಅಥವಾ ವಾಹನಗಳ ಮೂಲಕವೂ ಹೋಗಬಹುದು.

ಕಡಿದಾದ ದಾರಿ ಇರುವುದರಿಂದ ಚಿಕ್ಕ ವಾಹನಗಳು ಮಾತ್ರ ಇಲ್ಲಿಗೆ ಬಂದು ಹೋಗಬಹುದು. ಈ ಜಲಪಾತದ ನೀರಿನ ಹರಿವು ಎರಡು ಭಾಗಗಳಾಗಿ ವಿಂಗಡನೆಯಾಗಿ ಬೀಳುವುದರಿಂದ ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಹೆಸರಿಸಲಾಗಿದೆ. ಜಲಪಾತದ ಸುಂದರ ಸೊಬಗು ನೋಡುತ್ತ, ರಭಸದಿಂದ ಬೀಳುವ ನೀರಿನ ಶಬ್ದವನ್ನು ಕೇಳುತ್ತ ಪ್ರವಾಸಿಗರು ಇಲ್ಲಿ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಕಳೆಯಬಹುದು. ಅಲ್ಲದೇ ಈ ಜಲಪಾತದಿಂದ ಬೀಳುವ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮರೋಗ ಮತ್ತು ಅದಕ್ಕೆ ಸಂಬಂಧಿಸಿದ ಇನ್ನಿತರೆ ರೋಗಗಳು ವಾಸಿಯಾಗುತ್ತವೆ ಎಂಬ ಗಾಢವಾದ ನಂಬಿಕೆಯಿದೆ. ಹೆಬ್ಬೆ ಫಾಲ್ಸ್ ಗೆ ಬರಲು ಕಾಲು ದಾರಿ ಕೂಡ ಇದ್ದು ಸಾಹಸಕ್ರೀಡೆ ಮಾಡಬಯಸುವ ಪ್ರವಾಸಿಗರು ಇಲ್ಲಿಗೆ ಚಾರಣದ ಮೂಲಕವೂ ಬರಬಹುದು. ಇಲ್ಲಿ ಸಾಹಸಜಲಕ್ರೀಡೆಯನ್ನು ಪ್ರವಾಸಿಗರು ಆನಂದಿಸಬಹುದು. ಕೆಮ್ಮಣ್ಣುಗುಂಡಿಯಿಂದ ಹೆಬ್ಬೆ ಫಾಲ್ಸ್ ಗೆ ಬರಲು ಇಲ್ಲಿ ಬಾಡಿಗೆ ಜೀಪ್ ಗಳ ಸೌಲಭ್ಯವಿರುವುದರಿಂದ ಪ್ರವಾಸಿಗರಿಗೆ ಅನುಕೂಲಕರವಾಗಿದೆ.

ಹೆಬ್ಬೆ ಫಾಲ್ಸ್‌ನ ಸುತ್ತಲೂ ದಟ್ಟ ಅರಣ್ಯ ಹಾಗೂ ಕಾಫಿ ತೋಟದ ಹಸಿರಿನ ವಿಹಂಗಮ ದೃಶ್ಯವಿದೆ. ಈ ಜಲಪಾತದ ನೀರಿನ ಹರಿವು ಎರಡು ಭಾಗಗಳಾಗಿ ವಿಂಗಡನೆಯಾಗಿ ಬೀಳುವುದರಿಂದ ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಹೆಸರಿಸಲಾಗಿದೆ. ಜಲಪಾತದ ಸುಂದರ ಸೊಬಗು ನೋಡುತ್ತ, ರಭಸದಿಂದ ಬೀಳುವ ನೀರಿನ ಶಬ್ದವನ್ನು ಕೇಳುತ್ತ ಪ್ರವಾಸಿಗರು ಇಲ್ಲಿ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಕಳೆಯಬಹುದು

ತಲುಪುವುದು ಹೇಗೆ? ರಸ್ತೆಯ ಮೂಲಕ: ಬಿರುರ್ ಎನ್ನುವುದು ಕಡೂರು ತಾಲೂಕಿನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಬೆಂಗಳೂರು-ಚಿಕ್ಕಮಗಳೂರು ಅಥವಾ ಬೆಂಗಳೂರು-ಶಿವಮೊಗ್ಗ ಬಸ್ಸುಗಳ ನಡುವೆ ಸಾಕಷ್ಟು ಬಸ್‌ಗಳಿವೆ. ಬೀರೂರ್ ನಿಂದ, ಸ್ಥಳೀಯ ಟ್ಯಾಕ್ಸಿ ಅಥವಾ ಖಾಸಗಿ ಬಸ್‌ಗಳಂತಹ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನೂ ಬಳಸಬಹುದು.