ನೋಡು ಬಾ ಈ ನಯನ ಮನೋಹರ ಜಲಪಾತ

ನೋಡು ಬಾ ಈ ನಯನ ಮನೋಹರ ಜಲಪಾತ

ಉತ್ತರ ಕನ್ನಡ ಜಿಲ್ಲೆಯ ಯೆಲ್ಲಪುರದಿಂದ 32 ಕಿ.ಮೀ ದೂರದಲ್ಲಿ ಸತೋದಿ ಜಲಪಾತವಿದೆ. ದಟ್ಟ ಕಾಡುಗಳ ನಡುವೆ ನೆಲೆಸಿರುವ ಸತಾದಿ ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಇದು ಶಿರಸಿಯಿಂದ  ೭೩ ಕಿಲೋಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಸುಮಾರು ೩೨ ಕಿ.ಮೀ. ದೂರದಲ್ಲಿದೆ. ಈ ಜಲಪಾತವು ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವುದಲ್ಲದೆ ದಟ್ಟ ಕಾನನದ ನಡುವೆ ಸೇರಿಕೊಂಡಿದೆ. ಹಲವಾರು ಝರಿಗಳಿಂದ ಸೇರಿದ ನೀರು ಸುಮಾರು ೧೫ ಮೀಟರ್ ಎತ್ತರದಿಂದ ಧುಮುಕುತ್ತದೆ. ನಂತರ ಕೊಡಸಳ್ಳಿ ಜಲಾಶಯದ  ಮೂಲಕ ಕಾಳಿ ನದಿಯನ್ನು ಸೇರುತ್ತದೆ. ಯಲ್ಲಾಪುರದಿಂದ ಹುಬ್ಬಳ್ಳಿ ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ೫ ಕಿ.ಮೀ. ನಷ್ಟು ಮುಂದೆ ಸಾಗಿ ಎಡಕ್ಕೆ (ಕಲಘಟಗಿ, ಹುಬ್ಬಳ್ಳಿಯಿಂದ ಬರುವವರು ಬಲಕ್ಕೆ ತಿರುಗಬೇಕು) ತಿರುಗಿ ೨೫ ಕಿ.ಮೀ. ಸಾಗಿದರೆ ಸಾತೋಡಿ ಜಲಪಾತದ ಪ್ರದೇಶವು ಕಾಣಸಿಗುತ್ತದೆ. ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು(ಕೆಲವೊಮ್ಮೆ ಪಡೆಯದೆಯೂ ತೆರಳಬಹುದು) ೨ ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತದ ಸೌಂದರ್ಯವು ಕಾಣುತ್ತದೆ.

ಉತ್ತರ ಕನ್ನಡ ಜಿಲ್ಲೆ, ಜಲಪಾತಗಳಿಗೆ ತವರು ಮನೆ. ಜಲಪಾತಗಳ ಜಿಲ್ಲೆಯೆಂದೇ ಕೆಲವೊಮ್ಮೆ ಕರೆಸಿಕೊಳ್ಳುವ ಈ ಪ್ರದೇಶ, ಮಳೆಗಾಲದ ದಿನಗಳಲ್ಲಿ ಜಿಲ್ಲೆಯ ಹಳ್ಳಿಗಳತ್ತ ‘ಪಾದಯಾತ್ರೆ’ ಮಾಡಿದರೆ ನಮಗೆ ಕಾಣಿಸುವುದು ಬಹುಪಾಲು ಜಲಪಾತಗಳೇ. ನಿತ್ಯ ಹರಿದ್ವರ್ಣದ ಕಾಡುಗಳು, ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿ ಪ್ರಪಾತಕ್ಕೆ ಧುಮುಕುವ ನದಿಗಳ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.

ಸಾತೋಡಿ ಜಲಪಾತವು ಸ್ವಾಭಾವಿಕ ಸೌಂದರ್ಯದ ಮೂರ್ತರೂಪವಾಗಿದೆ, ಇದು ಅನೇಕರಿಂದ ಮೆಚ್ಚುಗೆ ಪಡೆದಿದೆ. ಜಲಪಾತಗಳ ಸುತ್ತಲೂ ಇರುವ ಬಂಡೆಗಳ ರಚನೆಯು ನೈಸರ್ಗಿಕ ಆವರಣವನ್ನು ಹೊಂದಿದ್ದು, ಅದರಲ್ಲಿ ಸುಂದರವಾದ ಹಸಿರು ಮತ್ತು ಸ್ಪಷ್ಟ ಮತ್ತು ಸ್ಫಟಿಕ ನೀರನ್ನು ಹೊಂದಿದೆ. ಜಲಪಾತವು ವರ್ಷವಿಡೀ ನೀರನ್ನು ಹೊಂದಿದೆ. ಅನೇಕ ಉಪನದಿಗಳಿಂದ ತುಂಬಿದ ಜಲಪಾತವು ಯಾವಾಗಲೂ ನೀರು ಹೊಂದಿದೆ ,ತಂಪಾದ ನೀರನ್ನು ಆನಂದಿಸಬಹುದು ಮತ್ತು ಸ್ಪಷ್ಟ ನೀರಿನ ಮೂಲಕ ಈಜಬಹುದು. ಪ್ರಶಾಂತ ಸ್ಥಳವು ಪಿಕ್ನಿಕ್ಗೆ ಸೂಕ್ತವಾಗಿದೆ