ದೂಧ್ ಸಾಗರ ಜಲಪಾತ

ದೂಧ್ ಸಾಗರ ಜಲಪಾತ

ತ್ವರಿತ ಗತಿಯಲ್ಲಿ ಮುನ್ನುಗ್ಗುತ್ತಿರುವ ನಗರ ಜೀವನದಿಂದ ವಿರಾಮ ಪಡೆಯಲು ಎಲ್ಲರೂ ಬಯಸುವುದು ಸಹಜವಾಗಿದೆ. ಯಾವಾಗಲೊಮ್ಮೆಯಾದರೂ ನಾವು ಸಾಹಸಿ ಯಾತ್ರೆಗೆ ಹೋಗಲು ಬಯಸುತ್ತೇವೆ. ಹೀಗೆ ಹೋಗುವುದರಿಂದ ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ರಿಫ್ರೆಶ್ ಮಾಡುತ್ತದೆ ಮತ್ತು ನಮ್ಮ ಜೀವನದಲ್ಲಿ ನಾವು ಹೊಸ ಉತ್ಸಾಹವನ್ನು ಪಡೆಯುತ್ತೇವೆ.ಬೆಂಗಳೂರಿನಿಂದ ಈ ರೀತಿಯ ವಿರಾಮವನ್ನು ಪಡೆಯುವುದು ಕೇವಲ 9 ಗಂಟೆಗಳಷ್ಟು ದೂರದಲ್ಲಿದೆ ಅದು ಯಾವುದೆಂದರೆ ದೂಧ್ ಸಾಗರ್.

ನೀವು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ! ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಭಾರತದ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಇದು ಮಾಂಡವಿ ನದಿಯಿಂದ ಹರಿಯುತ್ತದೆ.ಇದು ಬೆಂಗಳೂರಿನಿಂದ ಸುಮಾರು 560 ಕಿ.ಮೀ ದೂರದಲ್ಲಿದೆ ಮತ್ತು ಗೋವಾದಿಂದ ಕೇವಲ 29 ಕಿ.ಮೀ ಅಂತರದಲ್ಲಿದೆ. ಈ ನಾಲ್ಕು ಹಂತದಿಂದ ಬೀಳುವ ಜಲಪಾತವಾಗಿದ್ದು 1017 ಅಡಿ ಎತ್ತರದಿಂದ ಇಳಿಯುತ್ತದೆ! ದೂಧ್ ಸಾಗರ ಹೆಸರೇ ಸೂಚಿಸುವಂತೆ ಅಕ್ಷರಶಃ “ಹಾಲು ಸಮುದ್ರ” ಎಂದು ಅರ್ಥೈಸುತ್ತದೆ ಅಲ್ಲದೆ ಇದರ ನೋಟವು ಹಾಲಿನ ಸಮುದ್ರವನ್ನು ನೋಡಿದಂತೆ ಕಾಣುತ್ತದೆ. ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಭವ್ಯವಾದ ಜಲಪಾತವು ಇದ್ದು ಸುತ್ತಲೂ ಶ್ರೀಮಂತವಾದ ಅರಣ್ಯ ಪೊದೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ಆವೃತವಾಗಿದೆ. ಟ್ರಕ್ಕಿಂಗ್ ಮಾಡುವ ಸಾಹಸಿಗಳಿಗೆ ದೂದ್ ಸಾಗರ್ ಒಂದು ಕನಸಿನ ಸ್ಥಳವಾಗಿದೆ

ದೂದ್ ಸಾಗರಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಮಳೆಗಾಲವು ದೂಧ್ ಸಾಗರ್ ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ ಈ ಸಮಯದಲ್ಲಿ ಜಲಪಾತವು ನೀರಿನಿಂದ ತುಂಬಿರುತ್ತದೆ. ಆದರೆ ಜಲಪಾತವನ್ನು ವೀಕ್ಷಿಸಲು ನೀವು ಬಯಸಿದರೆ ಮಾತ್ರ ನೀವು ಈ ಸಮಯದಲ್ಲಿ ಹೋಗಬಹುದು. ನೀವು ಟ್ರಕ್ಕಿಂಗ್ ಮಾಡಲು ಇಲ್ಲಿಗೆ ಹೋಗಬಯಸುವಿರಾದರೆ, ಮಾನ್ಸೂನ್ ನಂತರ ಅಕ್ಟೋಬರ್ ನಿಂದ ಫೆಬ್ರುವರಿ ವರೆಗಿನ ತಿಂಗಳುಗಳು ಸೂಕ್ತವಾಗಿವೆ.