ಸೋಮೇಶ್ವರ ಬೀಚ್ ಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಸೋಮೇಶ್ವರ  ಬೀಚ್ ಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಮಂಗಳೂರಿನಿಂದ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಕಿ.ಮೀ. ದೂರದಲ್ಲಿದೆ ಸೋಮೇಶ್ವರ ಕಡಲ ತೀರ. ತುದಿಗಾಣದ ಮರಳಿನ ತೀರ ಪ್ರದೇಶವನ್ನು ಇದು ಹೊಂದಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ತೀರವೇ ಕಾಣುತ್ತದೆ. ಇದಕ್ಕೆ ಒಂದಂಚಿನಲ್ಲಿ ಸಾಲಾಗಿ ಪಾಮ್‌ ಮರಗಳನ್ನು ಬೆಳೆಸಲಾಗಿದೆ. ಈ ಕಡಲ ತೀರ ರುದ್ರ ಶಿವ ಎಂಬ ಹೆಸರಿನಿಂದ ಅತ್ಯಂತ ಪ್ರಸಿದ್ಧಿ ಹೊಂದಿದೆ. ಏಕೆಂದರೆ ಈ ಹೆಸರಿನಲ್ಲಿ ಇಲ್ಲೊಂದು ಬೃಹತ್‌ ಬಂಡೆ ಇದೆ. ಇಲ್ಲೊಂದು ದೇವಾಲಯವೂ ಇದ್ದು ಅದನ್ನು ಅಬ್ಬಕ್ಕ ದೇವಿ ಆಳ್ವಿಕೆ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ರಾಣಿಯೂ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದಾಳೆ.

ಮಂಗಳೂರಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಅವಧಿ ಸೂಕ್ತ. ಇಲ್ಲಿನ ಆಕರ್ಷಕ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿದೆ. ಚಿನ್ನದ ಬಣ್ಣದ ಕೆಂಪು ಆಕಾಶ ಸಂಜೆಯ ಸೂರ್ಯಾಸ್ತವನ್ನು ಸೆರೆ ಹಿಡಿಯಲು ಅತ್ಯಾಕರ್ಷಕ ಅವಕಾಶ ಒದಗಿಸುತ್ತದೆ. ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗಿದ್ದರೂ ಸೂಕ್ತ ಜನಪ್ರಿಯತೆ ಒದಗಿಸುವ ಕಾರ್ಯ ಸರ್ಕಾರದಿಂದ ಆಗಿಲ್ಲ. ಇಲ್ಲಿನ ಜನಪ್ರಿಯತೆಯನ್ನು ಬಳಸಿಕೊಳ್ಳುವ ಕಾರ್ಯ ಮಾಡಿಲ್ಲ. ಬೈಂದೂರಿನಿಂದ ಈ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66, ಇಲ್ಲಿಗೆ ತಲುಪಲು ಸುಗಮ ಮಾರ್ಗ ಕಲ್ಪಿಸಿದೆ. ದೇವಾಲಯ ಹಾಗೂ ಕಡಲ ತೀರ ನೋಡಿ ತೆರಳಲು ಇದು ಉತ್ತಮ ಮಾರ್ಗ