ಬರ್ಕಣ ಜಲಪಾತ ಎಲ್ಲಿದೆ ಗೊತ್ತಾ? ಈ ಲೇಖನ ಓದಿ ..

ಬರ್ಕಣ ಜಲಪಾತ ಎಲ್ಲಿದೆ ಗೊತ್ತಾ? ಈ ಲೇಖನ ಓದಿ ..

ಬರ್ಕಣ ಜಲಪಾತವು ಭಾರತದ ಅತಿ ಎತ್ತರದ ಹತ್ತು ಜಲಪಾತಗಳಲ್ಲೊಂದಾಗಿದ್ದು 850 ಅಡಿ  ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಆಗುಂಬೆಯಿಂದ ಕೇವಲ 7 ಕಿ.ಮೀ ದೂರದಲ್ಲಿದ್ದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 259 ಮೀಟರ್ ಎತ್ತರದಲ್ಲಿದೆ ಈ ಪ್ರಾಂತ್ಯದಲ್ಲಿ ಹರಿಯುವ ಸೀತಾನದಿಯಿಂದ ಇದು ಹುಟ್ಟುತ್ತದೆ. ಇದು ಆಗುಂಬೆಗೆ ಬರುವವರೆಲ್ಲರು ನೋಡಲೇ ಬೇಕಾದ ತಾಣವೆಂದು ಹೆಸರಾಗಿದೆ.ಈ ಜಲಪಾತಕ್ಕೆ ’ಬರ್ಕ’ ಎಂಬ ಹೆಸರು  ಇಲ್ಲಿ ವಾಸಿಸುವ ಇಲಿ ಜಿಂಕೆ ಅಥವಾ ’ಬರ್ಕ’ದಿಂದ ಬಂದಿದೆ.

ಪ್ರವಾಸಿಗರು ಈ ಜಲಪಾತ ತಲುಪಲು ಪಶ್ಚಿಮ ಘಟ್ಟದಿಂದ ಗುಂಬೊ ಘಟ್ಟಗಳ ಕಡೆ ಹೋಗುವ ಅತ್ಯಂತ ಕಡಿದಾದ ಹಾದಿಯಲ್ಲಿ ಕಾಲ್ನಡಿಗೆ ಮೂಲಕ ತಲುಪಬಹುದು. ದ್ವಿಚಕ್ರ ವಾಹನ ಹೊಂದಿರುವವರು ವಾಹನಗಳಿಗೆ ಬಳಸುವ ರಸ್ತೆ ಮೂಲಕ ಸಹಾ ಬರ್ಕಣ ಜಲಪಾತ ತಲುಪಬಹುದು. ಚಳಿಗಾಲದ ಮುಂದಿನ ದಿನಗಳು ಈ ಜಲಪಾತ ನೋಡಲು ಪ್ರಶಸ್ತವಾದ ದಿನಗಳಾಗಿವೆ.

ಪ್ರವಾಸಿಗರು ಪಶ್ಚಿಮ ಘಟ್ಟದ ಸುಂದರವಾದ ಗಿರಿ ಶಿಖರಗಳ ಸೌಂದರ್ಯವನ್ನು ಬರ್ಕನ ಜಲಪಾತದ ಸಮೀಪವಿರುವ ವೀಕ್ಷಣಾ ಗೋಪುರದಿಂದ ನೋಡಿ ಸವಿಯಬಹುದು. ಈ ಜಲಪಾತವು ಪಶ್ಚಿಮ ಘಟ್ಟದ ವಿವಿಧ ವನಸ್ಪತಿಗಳಿಂದ ಬಿದಿರಿನ ವರೆಗೆ ಬಗೆ ಬಗೆಯ ಸಸ್ಯಗಳಿಂದ ಕೂಡಿದ ಕಾಡಿನಿಂದ ಸುತ್ತುವರೆದಿದೆ.