Tourism in karnataka, Tourism Karnataka, Tourism of karnataka
ರಂಗನತಿಟ್ಟು ಪಕ್ಷಿಧಾಮವು ಶ್ರೀರಂಗಪಟ್ಟಣಕ್ಕೆ ಸಮೀಪದಲ್ಲಿ ಇದ್ದು, ಕಾವೇರಿ ನದಿಯ ತೀರದಲ್ಲಿ ನೆಲೆಸಿದೆ. ಇದು ಇಲ್ಲಿನ ನೋಡಲೆಬೇಕಾದ ತಾಣಗಳಲ್ಲಿ ಒಂದಾಗಿದೆ
1940 ರ ವರ್ಷದಲ್ಲಿ ಈ ಪಕ್ಷಿಧಾಮವನ್ನು ಹಕ್ಕಿ ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಪಕ್ಷಿಧಾಮವು ಆರು ದ್ವೀಪಗಳ ಸಮೂಹವಾಗಿದ್ದು, 0.67 ಚ.ಕಿ.ಮೀ ನಷ್ಟು ವ್ಯಾಪಿಸಿದೆ. ಇಲ್ಲಿಗೆ ಭೇಟಿಕೊಡಲು ಜೂನ್ ನಿಂದ ಅಕ್ಟೋಬರ್ ನಡುವಿನ ಅವಧಿ ಅತ್ಯಂತ ಸೂಕ್ತವಾಗಿದೆ. ಈ ಪಕ್ಷಿಧಾಮವು ಸ್ಟಾರ್ಕ್ ಮತ್ತು ಪೆಲಿಕಾನ್ ಗಳಂತಹ ವಿದೇಶಿ ವಲಸೆ ಹಕ್ಕಿಗಳ ಆವಾಸಸ್ಥಾನವಾಗಿದೆ. ಇವುಗಳ ಜೊತೆಗೆ ಬಿಳಿ ಐಬಿಸ್, ಸ್ಪೂನ್ ಬಿಲ್ಲ್(ರಾಜ ಹಂಸ), ಎಗ್ರೆಟ್, ಚಿಕ್ಕ ಕಾರ್ಮೊರಂಟ್, ಹಾವುಹಕ್ಕಿ ಮತ್ತು ಪಾರ್ಟ್ರಿಡ್ಜ್ ನಂತಹ ಹಕ್ಕಿಗಳು ಸಹಾ ಇಲ್ಲಿ ಕಾಣಸಿಗುತ್ತವೆ. ಪ್ರವಾಸಿಗರು ಇಲ್ಲಿನ ದ್ವೀಪಗಳಲ್ಲಿ ದೋಣಿಯಾನ ಮಾಡುವಾಗ ತೆರೆದ ಕೊಕ್ಕಿನ ಕೊಕ್ಕರೆಗಳನ್ನು(ಒಪನ್ ಬಿಲ್ಲ್ ಡ್ ಸ್ಟಾರ್ಕ್), ಬಕ ಪಕ್ಷಿಗಳನ್ನು (ಹೆರಾನ್), ಡಾಂಟೆಗಳನ್ನು ಅವುಗಳ ಕೂಗುವಿಕೆಯನ್ನು ಅನುಸರಿಸಿ ಗುರುತಿಸಬಹುದು
ಪ್ರವಾಸಿಗರು ಈ ಪಕ್ಷಿಧಾಮಕ್ಕೆ ಬೆಳಗ್ಗೆ 9 ರಿಂದ 6 ರವರೆಗೆ ಭೇಟಿಕೊಡಬಹುದು. ಇಲ್ಲಿನ ಪ್ರವೇಶ ಶುಲ್ಕ ಭಾರತೀಯರಿಗೆ 50ರೂಪಾಯಿ ಮತ್ತು ವಿದೇಶಿಯರಿಗೆ 300 ರೂಪಾಯಿ ಇದೆ. ಪ್ರವಾಸಿಗರು ಈ ಪಕ್ಷಿಧಾಮದಲ್ಲಿ ದೋಣಿಯಾನವನ್ನು ಸಹ ಕೈಗೊಳ್ಳಬಹುದು.ಇದಕ್ಕೆ ಶುಲ್ಕ ಭಾರತೀಯರಿಗೆ 50ರೂಪಾಯಿ ಮತ್ತು ವಿದೇಶಿಯರಿಗೆ ರೂಪಾಯಿ 300/-